ಸುಧಾ ಚಂದ್ರನ್ ರವರು(೨೭ ಸಪ್ಟೆಂಬರ್ ೧೯೬೫) ಭಾರತೀಯ ಚಲನಚಿತ್ರ ಮತ್ತು ಕಿರುತರೆ ನಟಿ ಹಾಗೂ ಭರತನಾಟ್ಯ ನೃತ್ಯ ಕಲಾವಿದೆ . ಸುಧಾ ಚಂದ್ರನ್ ಮತ್ತು ಆಕೆಯ ತಂದೆ ತಾಯಿಯೊಂದಿಗೆ ೨ ಮೇ ೧೯೮೧ ರಂದು ದೇವಸ್ಥಾನಕ್ಕೆ ತೆರಳುತ್ತಿರುವಾಗ ತಮಿಳುನಾಡಿನ ತಿರುಚಿರಾಪಲ್ಲಿ ಬಳಿ ರಸ್ತೆ ಅಪಘಾತದಿಂದಾಗಿ ತನ್ನ ಕಾಲನ್ನು ಕಳೆದುಕೊಂಡರು . ನಂತರ ಕೃತಕ ಕಾಲಿನ ಸಹಾಯದಿಂದ ಅವರು ನಡೆಯಲು ಪ್ರಾರಂಭಿಸಿದರು. ಸುಧಾ ರವರು ಕಾಹಿನ್ ಕಿಸ್ಸಿ ರೋಜ್ ನಲ್ಲಿ ರಾಮೋಲಾ ಸಿಕಂದ್ , ನಾಗಿನ್ ೧ ಮತ್ತು ನಾಗಿನ್ ೨ ನಲ್ಲಿ ಯಾಮಿನಿ ಸಿಂಗ್ ರಹೇಜಾ , ದೈವಂ ತಂದ ವೀಡು ನಲ್ಲಿ ಚಿತ್ರಾದೇವಿ ಹಮ್ ಪಾಂಚ್ ( ೨ ) ನಲ್ಲಿ ಆನಂದ ನ ಮೊದಲನೆಯ ಹೆಂಡತಿಯಾಗಿ , ಪರ್ದೇಸ್ ಮೆ ಹೆ ಮೇರಾ ದಿಲ್ ನಲ್ಲಿ ಹರ್ಜೀತ್ ಖುರಾನ , ಯೆ ಹೆ ಮೊಹೋಬತೆ ನಲ್ಲಿ ಸುಧಾ ಶ್ರೀವಾತ್ಸವ್ ಎಂಬ ಪಾತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ. == ಜನನ , ಆರಂಭಿಕ ಜೀವನ == ಸುಧಾ ಚಂದ್ರನ್ ರವರು ೨೭ ಸೆಪ್ಟೆಂಬರ್ ೧೯೬೫ ರಂದು ಮುಂಬೈ ನಲ್ಲಿ ತಮಿಳು ಮಾತನಾಡುವ ಕುಟುಂಬದಲ್ಲಿ ಜನಿಸಿದರು. ನೆಟ್ವುವಿನ ಸಂದರ್ಶನವೊಂದರಲ್ಲಿ, ಅವರು ಹುಟ್ಟಿ ಬೆಳೆದದ್ದು ಮುಂಬಯಿಯಲ್ಲಿ ಎಂದು ಹೇಳಿದ್ದರು, ಆದರೆ ಆಕೆಯ ಕುಟುಂಬವು ತಮಿಳುನಾಡಿನ ತಿರುಚಿರಪಳ್ಳಿಯ ವಯಾಲೂರ್‌ ನವರು. ಅವರ ತಂದೆ ಕೆ.ಡಿ.ಚಂದ್ರನ್, ಯುಎಸ್ಎ ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಮಾಜಿ ನಟ. ಸುಧಾ ಚಂದ್ರನ್ ತನ್ನ ಬಿ.ಎ. ಪದವಿಯನ್ನು ಮುಂಬೈನ ಮಿಥಿಬಾಯ್ ಕಾಲೇಜಿನಿಂದ ಹಾಗೂ ತನ್ನ ಎಂ.ಎ ಪದವಿಯನ್ನು ಅದೇ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. === ಅಪಘಾತವಾದ ಸಂದರ್ಭ === ಸುಧಾ ಚಂದ್ರನ್ ಮತ್ತು ಆಕೆಯ ತಂದೆ ತಾಯಿಯೊಂದಿಗೆ ೨ ಮೇ ೧೯೮೧ ರಂದು ದೇವಸ್ಥಾನಕ್ಕೆ ತೆರಳುತ್ತಿರುವಾಗ ಮಧ್ಯ ರಾತ್ರಿ ಆಕೆ ತೆರಳುತ್ತಿದ್ದ ಬಸ್ ತೀರ್ವ ಅಪಘಾತಕ್ಕೆ ಸಿಲುಕಿತ್ತು . ಸುಧಾ ಅವರು ಚಾಲಕನ ಹಿಂಬದಿಯ ಸೀಟಿನಲ್ಲಿ ಕುಳಿತ್ತಿದ್ದರಿಂದ ಅಪಘಾತಕ್ಕೆ ಬಲಿಯಾದರು . ಅಪಘಾತದ ಸಂದರ್ಭದಲ್ಲಿ ಸುಧಾ ಚಂದ್ರನ್ ರವರು ಕಾಲನ್ನು ಮುಂದಕ್ಕೆ ಚಾಚಿದ್ದರು ಇದರಿಂದಾಗಿ ಅವರ ಕಾಲು ಸೀಟಿನ ಮಧ್ಯಕ್ಕೆ ಸಿಲುಕಿತ್ತು. ಬಸ್ ನಲ್ಲಿದ್ದ ಬಹಳಷ್ಟು ಪ್ರಯಾಣಿಕರು ಗಾಯಗೊಂಡಿದ್ದರು . ಸ್ಥಳೀಯರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದರು . ಬಲಗಾಲು ತೀರ ಗಾಯಗೊಂಡಿತ್ತು . ವೈದ್ಯರು ಆಕೆಗೆ ಪ್ರಥಮ ಚಿಕಿತ್ಸೆಯನ್ನು ನೀಡಿದರು . ಕೆಲ ದಿನಗಳ ನಂತರ ಆಕೆಯ ಕಾಲು ಗ್ಯಾಂಗ್ರೀನ್ ಆಗಿದೆ ಎಂದು ತಿಳಿಯಿತು . ಕೂಡಲೆ ಕಾಲುಗಳನ್ನು ತುಂಡು ಮಾಡುವುದು ಸೂಕ್ತ ಅಥವಾ ಪ್ರಾಣಕ್ಕೆ ಅಪಾಯ ಎಂದು ವೈದ್ಯರು ಸಲಹೆ ನೀಡಿದರು. ಸಲಹೆಯ ಮೇರಿಗೆ ಆಕೆಯ ಕಾಲು ತುಂಡು ಮಾಡಲಾಯಿತು . ಕಾಲಿನ ಬದಲಾಗಿ ಮರದ ಕಾಲನ್ನು ಜೋಡಿಸಲಾಯಿತು . ಮೊದಲಿನಲ್ಲಿ ಸುಧಾರವರು ಬೇಸತ್ತರು . ನಂತರ ಅಭ್ಯಾಸವಾಯಿತು . ದಿನನಿತ್ಯ ಜೀವನದಲ್ಲಿ ಹೊಂದುಕೊಂಡರು . ದಿನ ಕಳೆದಂತೆ ಆತ್ಮವಿಶ್ವಾಸವು ಬೆಳೆಯಿತು . ಮುಂದಿನ ಓದಿನಲ್ಲಿ ಆಸಕ್ತಿವಹಿಸಿದರು . ಅವರ ತಂದೆ ಆಕೆಗೆ ಬೆಂಬಲವಾಗಿದ್ದರು . ವೀಲ್ ಚೇರನ್ನು ಉಪಯೋಗಿಸಲು ಸೂಚಿಸಿದರು . ಇವರು ಅದಕ್ಕೆ ನಿರಾಕರಿಸಿದರು . ಮರಗಾಲಿನಲ್ಲಿಯೇ ನಡೆಯಲು ಪ್ರಾರಂಭಿಸಿದರು . ೬ ತಿಂಗಳ ನಂತರ ಸುಧಾ ಚಂದ್ರನ್ ರವರು ಮ್ಯಾಗಜಿನ್ ಓದುತ್ತಿರುವಾಗ ಡಾಕ್ಟರ್ ಸೆತ್ತಿ ಜೈಪುರ ಅವರ ಕೃತಕ ಕಾಲಿನ ಬಗ್ಗೆ ತಿಳಿದ ಸುಧಾ ಚಂದ್ರನ್ ಅವರ ಕಲಾ ಲೋಕಕ್ಕೆ ಬೆಳಕು ಚೆಲ್ಲಿದಂತಾಯಿತು . == ಶಿಕ್ಷಣ == ಸುಧಾ ರವರು ಮಿಥಿಬಾಯ್ ಕಾಲೇಜ್ ಮುಂಬೈನಲ್ಲಿ ಬಿ.ಎ ಮತ್ತು ಎಮ್.ಎ ಪದವಿಯನ್ನು ಪಡೆದರು. == ವೃತ್ತಿಜೀವನ == ಸುಧಾ ರವರು ಮಯೂರಿ ಎಂಬ ತೆಲುಗು ಚಲನಚಿತ್ರದಿಂದ ತನ್ನ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದರು. ಈ ಚಲನಚಿತ್ರವನ್ನು ತಮಿಳು , ಮಲೆಯಾಳಂ ಹಾಗೂ ಹಿಂದಿಯಲ್ಲಿ ನಾಚೆ ಮಯೂರಿ ಎಂಬ ಹೆಸರಿನಲ್ಲಿ ಡಬ್ ಮಾಡಲಾಯಿತು . ಈ ಚಿತ್ರದಲ್ಲಿ ಅಭಿನಯಿಸಿದ ಇವರಿಗೆ ೧೯೮೬ ರಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷವಾದ ಜ್ಯೂರಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು . == ಫಿಲ್ಮೋಗ್ರಾಫಿ == == ಪ್ರಶಸ್ತಿಗಳು == ನ್ಯಾಷನಲ್ ಫಿಲ್ಮ್ ಅವಾರ್ಡ್ / ಜ್ಯೂರಿ ಪ್ರಶಸ್ತಿ - ೧೯೮೬. ಸ್ಟಾರ್ ಪರಿವಾರ್ ಅವಾರ್ಡ್ಸ್ - ೨೦೦೪. ಇಂಡಿಯನ್ ಟೆಲಿವಿಷನ್ ಅಕಾಡೆಮಿ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್ ಇನ್ ನೆಗೆಟಿವ್ ರೋಲ್ - ೨೦೦೫. ಏಷಿಯನೆಟ್ ಟೆಲಿವಿಷನ್ ಅವಾರ್ಡ್ಸ್ - ೨೦೧೩. ವಿಜಯ್ ಟೆಲಿವಿಷನ್ ಅವಾರ್ಡ್ - ೨೦೧೪. ವಿಜಯ್ ಟೆಲಿವಿಷನ್ ಅವಾರ್ಡ್(ಬೆಸ್ಟ್ ಅತ್ತೆ) - ೨೦೧೫. ಕಲರ್ಸ್ ಗೋಲ್ಡನ್ ಪೆಟಲ್ ಅವಾರ್ಡ್ಸ್ - ೨೦೧೬. ಕಲರ್ಸ್ ಗೋಲ್ಡನ್ ಪೆಟಲ್ ಅವಾರ್ಡ್ಸ್(ಬೆಸ್ಟ್ ಕಾಮಿಕ್ ರೋಲ್) - ೨೦೧೭ . == ತೀರ್ಪುಗಾರರಾಗಿ == == ಉಲ್ಲೇಖಗಳು == ://../2010/05/22/-------/